ತುಮಕೂರು,ಜನವರಿ 18:ಇತ್ತೀಚಿಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ತುಮಕೂರಿನ ಹುಲಿನಾಯ್ಕರ್, ಮೈಸೂರಿನ ಸಂದೇಶ್ ನಾಗರಾಜ್, ಕೆ.ಆರ್.ಮಲ್ಲಿಕಾರ್ಜುನಪ್ಪ, ಬೀದರ್‌ನ ಮಾಜಿ ಸಚಿವ ಬಸವರಾಜ್ ಪಾಟೀಲ್ ಹುಮ್ನಾಬಾದ್ ಸೇರಿದಂತೆ ೧೭ ಮಂದಿ ಇಂದಿಲ್ಲಿ ಮೇಲ್ಮನೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇವರಲ್ಲದೆ ಬಿ. ರಾಮಕೃಷ್ಣ (ಮಂಡ್ಯ) ಇ. ಕೃಷ್ಣಪ್ಪ (ಬೆಂಗಳೂರು) ಎಂ.ಆರ್. ಬಿಜೆಪಿಯ ಆರ್.ಕೆ. ಸಿದ್ದರಾಮಣ್ಣ (ಶಿವಮೊಗ್ಗ)ಬಿ.ಹೆಚ್. ತಿಪ್ಪಾರೆಡ್ಡಿ (ಚಿತ್ರದುರ್ಗ)
ಮೃತ್ಯುಂಜಯ ಜಿನಗಾ (ಬಳ್ಳಾರಿ) ಶಿವರಾಜ್ ಸಜ್ಜನರ್ (ಧಾರವಾಡ) ಕೋಟಾ ಶ್ರೀನಿವಾಸ ಪೂಜಾರಿ (ದಕ್ಷಿಣ ಕನ್ನಡ) ಆಚಾರ್ ಹಾಲಪ್ಪ ಬಸಪ್ಪ (ರಾಯಚೂರು) ಜಿ.ಎಸ್. ನ್ಯಾಮಗೌಡ (ಬಿಜಾಪುರ) ಮಹಾಂತೇಶ ಕವಟಿಗಿ (ಬೆಳಗಾವಿ)
ಕಾಂಗ್ರೆಸ್‌ನ ದಯಾನಂದ (ಬೆಂಗಳೂರು) ಗೆದ್ದ ಏಕೈಕ ಮಹಿಳೆ ಎ.ವಿ. ಗಾಯತ್ರಿ ಶಾಂತೇಗೌಡ (ಚಿಕ್ಕಮಂಗಳೂರು) ಹಾಗೂ ಅಲ್ಲಮ ಪ್ರಭು ಪಾಟೀಲ್ (ಗುಲ್ಬರ್ಗ) ಅವರಿಗೆ ಪರಿಷತ್ತಿನ ಸಭಾಪತಿ ವೀರಣ್ಣ ಮತ್ತಿಕಟ್ಟಿ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಧಮಸಿಂಗ್, ಸಚಿವರಾದ ಕೆ.ಎಸ್.ಈಶ್ವರಪ್ಪ, ಹರತಾಳ ಹಾಲಪ್ಪ, ಮಾಜಿ ಸಚಿವ ಬಸವರಾಜ ಹೊರಟ್ಟಿ ಸೇರಿದಂತೆ ಪ್ರಮುಖ ಧುರೀಣರು ಭಾಗವಹಿಸಿದ್ದರು